Saturday, June 13, 2026
Homeಕರಾವಳಿಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ತಿರುಚಿದ ಕಿಡಿಗೇಡಿಗಳು:ಆಡಳಿತ ಮಂಡಳಿಯಿಂದ ದೂರು ಸಲ್ಲಿಕೆ

ಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ತಿರುಚಿದ ಕಿಡಿಗೇಡಿಗಳು:ಆಡಳಿತ ಮಂಡಳಿಯಿಂದ ದೂರು ಸಲ್ಲಿಕೆ

- Advertisement -
- Advertisement -

ಮಂಗಳೂರು: ಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಷನ್ ಅನ್ನು ಕಿಡಿಗೇಡಿಗಳು ತಿರುಚಿದ ಆರೋಪ ವ್ಯಕ್ತವಾಗಿದೆ.

ಮಂಗಳಾದೇವಿ ದೇವಸ್ಥಾನ ಇರುವ ಸ್ಥಳದ ಹೆಸರನ್ನು ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಅಂತ ಹೆಸರು ಬದಲಾವಣೆ ಮಾಡಲಾಗಿದೆ.

ದೇವಸ್ಥಾನದಿಂದ 200 ಮೀಟರ್ ದೂರದಲ್ಲಿ ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಇದ್ದು ಮ್ಯಾಪ್ ತಿರುಚಿರುವ ಕಿಡಿಗೇಡಿಗಳ ವಿರುದ್ಧ ದೇವಾಲಯದ ಆಡಳಿತ ಮಂಡಳಿ ದೂರು ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ‌ಕಮಿಷನರ್ ಮತ್ತು ಸೈಬರ್ ಕ್ರೈಮ್‌ಗೆ ದೂರು ನೀಡಲಾಗಿದ್ದು, ದೂರು ನೀಡುತ್ತಿದ್ದಂತೆಯೇ ಗೂಗಲ್ ಮ್ಯಾಪ್ ಲೊಕೇಷನ್ ಮತ್ತೆ ಸರಿ ಮಾಡಲ್ಪಟ್ಟಿದೆ. ನಿನ್ನೆ ಈ ಘಟನೆ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು ಇಂದು ದೂರು ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!