Saturday, June 6, 2026
Homeಕರಾವಳಿಸುಳ್ಯ ತಾಲೂಕಿನ ಕಳಂಜದಲ್ಲಿ ಹುಬ್ಬೇರಿಸುವ ಘಟನೆ; ಗಾಳಿಯಲ್ಲಿ ತೇಲಿದ ಜಲ್ಲಿಕಲ್ಲು

ಸುಳ್ಯ ತಾಲೂಕಿನ ಕಳಂಜದಲ್ಲಿ ಹುಬ್ಬೇರಿಸುವ ಘಟನೆ; ಗಾಳಿಯಲ್ಲಿ ತೇಲಿದ ಜಲ್ಲಿಕಲ್ಲು

- Advertisement -
- Advertisement -

ಸುಳ್ಯ: ನಮ್ಮ ಸುತ್ತಮುತ್ತಲು ನಡೆಯುವ ಕೆಲವೊಂದು ಅಚ್ಚರಿಯ ಘಟನೆಗಳು, ಪವಾಡಗಳು ನಮ್ಮಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಅಂತಹದ್ದೇ ಅಚ್ಚರಿಯ ಘಟನೆಯೊಂದು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ ನಡೆದಿದೆ.

ತಂಟೆಪ್ಪಾಡಿಯ ಪುಟ್ಟಣ್ಣ ಗೌಡ ಎಂಬವರ ಮಗಳು ಧನುಶ್ರೀ ಎಂದಿನಂತೆ ಕಳೆದ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಲೇಜಿಗೆ ತೆರಳಲು ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಚ್ಚರಿಯ ದೃಶ್ಯವೊಂದು ಕಂಡಿದೆ. ರಸ್ತೆಯಲ್ಲಿದ್ದ ಜಲ್ಲಿಕಲ್ಲೊಂದು ಗಾಳಿಯಲ್ಲಿ ತೇಲಾಡೋದು ಕಂಡಿದೆ. ಕೂಡಲೇ ಆಕೆ ಅದನ್ನುತ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಕೆಲವು ಸೆಕೆಂಡ್ ಗಳ ಕಾಲ ಕಲ್ಲು ಗಾಳಿಯಲ್ಲಿ ತೇಲಾಡಿದೆ.

ಇನ್ನು ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!