Sunday, June 7, 2026
Homeಕರಾವಳಿಪುತ್ತೂರು: ಬುರ್ಖಾ ತೆಗೆದು ಒಳಬರುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಚನಾ ಫಲಕದ ಫೋಟೋ ವೈರಲ್:ಒತ್ತಡದ ಬಳಿಕ ಫಲಕ‌...

ಪುತ್ತೂರು: ಬುರ್ಖಾ ತೆಗೆದು ಒಳಬರುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಚನಾ ಫಲಕದ ಫೋಟೋ ವೈರಲ್:ಒತ್ತಡದ ಬಳಿಕ ಫಲಕ‌ ತೆರವುಗೊಳಿಸಿದ ಆಸ್ಪತ್ರೆ ಸಿಬ್ಬಂದಿ

- Advertisement -
- Advertisement -

ಪುತ್ತೂರು: ಬುರ್ಖಾ ತೆಗೆದು ಒಳಗೆ ಬನ್ನಿ ಎಂದು ಆಸ್ಪತ್ರೆಯಲ್ಲಿ ಹಾಕಲ್ಪಟ್ಟ ಸೂಚನಾ ಫಲಕವೊಂದು ವಿವಾದಕ್ಕೆಡೆಯಾದ ಘಟನೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಇಸಿಜಿ ಕೊಠಡಿಯ ಬಾಗಿಲಿನಲ್ಲಿದ್ದ ಫಲಕದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ ಒಂದು ವರ್ಷಗಳ ಹಿಂದೆಯೇ ಅಳವಡಿಸಲ್ಪಟ್ಟಿದ್ದ ಸೂಚನಾ ಫಲಕದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ಹರಿಯಬಿಡಲಾಗಿತ್ತು.

ವಾಟ್ಸ್ ಅಪ್ ಗ್ರೂಪ್ ಗಳಲ್ಲೂ ಫೋಟೋ ಹರಿದಾಡಿದ ಬಳಿಕ ಆಸ್ಪತ್ರೆಗೆ ಸಿಬ್ಬಂದಿಗಳ ಮೇಲೆ ಒತ್ತಡ ವ್ಯಕ್ತವಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಫಲಕವನ್ನು ತೆರವುಗೊಳಿಸಿದ್ದಾರೆ.

- Advertisement -

Latest News

error: Content is protected !!