Thursday, June 4, 2026
Homeಕರಾವಳಿಕಡಬ; ಹಸುವನ್ನು ಬಲಿ ಪಡೆದ ಕಾಡಾನೆ

ಕಡಬ; ಹಸುವನ್ನು ಬಲಿ ಪಡೆದ ಕಾಡಾನೆ

- Advertisement -
- Advertisement -

ಕಡಬ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಹಸುವೊಂದು ಸಾವನಪ್ಪಿರುವ ಘಟನೆ ತಾಲೂಕು ಕೊಣಾಜೆಯ ಸಿ.ಆರ್.ಸಿ. ತಮಿಳು ಕಾಲೋನಿ ಬಳಿ ನಡೆದಿದೆ.   ಕಡಬ ಕೊಣಾಜೆ ದೊಡ್ಡಮನೆಯ ಅಶೋಕ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಟ್ಟಿದ್ದು, ಸಂಜೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ.

ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ದನ ತೋಟದಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬoದಿದೆ. ತೋಟದಲ್ಲಿ ನೀರಾವರಿ ಪೈಪ್ ಗಳು ಹಾನಿಯಾಗಿದ್ದು, ರಾತ್ರಿ ವೇಳೆ ಆನೆ ಬಂದಿರುವ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!