Saturday, May 18, 2024
Homeಕರಾವಳಿಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

spot_img
- Advertisement -
- Advertisement -

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ವಕೀಲರ ಭವನ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿಯಾದ ತಾರಕೇಶ್ವರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ವಹಿಸಿದ್ದರು. ಸಿ ಅಶೋಕ್ ಕರಿಯನೆಲ ಉಪಾಧ್ಯಕ್ಷರು ವಕೀಲರ ಸಂಘ ಬೆಳ್ತಂಗಡಿ  ಶ್ರೀ ಸಂದೀಪ್ ಡಿಸೋಜ, ಅಧ್ಯಕ್ಷರು ಯುವಕೀಲರ ವೇದಿಕೆ ಬೆಳ್ತಂಗಡಿ   ಖಜಾಂಚಿಯಾದ ಶ್ರೀ ಪ್ರಶಾಂತ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ. ಕೆ ನಿರೂಪಿಸಿದರು.

 ವಸಂತ ಮರಕಡ ಅಧ್ಯಕ್ಷರು ವಕೀಲರ ಸಂಘ ಬೆಳ್ತಂಗಡಿ ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇನ್ನು ಮುಖ್ಯ ಅತಿಥಿಗಳಾಗಿ : ಶ್ರೀ ದೇವರಾಜು ಹಿರಿಯ ಶ್ರೇಣಿ ನ್ಯಾಯಾಧೀಶರು ಬೆಳ್ತಂಗಡಿ

 ಸಂದೇಶ್ ಕೆ ಜೆ, ಪ್ರಧಾನ ನ್ಯಾಯಾಧೀಶರು ಬೆಳ್ತಂಗಡಿ,  ವಿಜಯೇಂದ್ರ ಟಿ ಎಚ್, ಹೆಚ್ಚುವರಿ ಸವಿನ್ ನ್ಯಾಯಾಧೀಶರು ಬೆಳ್ತಂಗಡಿ ಇವರು ಉಪಸ್ಥಿತರಿದ್ದರು.

 ಮುಖ್ಯ ಅತಿಥಿ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿ ಶ್ರೀ ಡಿಕೆ ಧನಂಜಯ ರಾವ್ ಸಂವಿಧಾನದ ಕುರಿತಾಗಿ ಚುಟುಕಾಗಿ ಅರ್ಥ ವಿವರಣೆಗೈದರು. ಶ್ರೀ ಪ್ರಶಾಂತ್ ಎಂ, ಖಜಾಂಚಿ ವಕೀಲರ ಸಂಘ ಬೆಳ್ತಂಗಡಿ, ಶ್ರೀ ಅಶೋಕ್ ಕರಿಯನೆಲ, ಉಪಾಧ್ಯಕ್ಷರು ವಕೀಲ ಸಂಘ ಬೆಳ್ತಂಗಡಿ,  ವೇದಿಕೆಯಲ್ಲಿ ಹಾಜರಿದ್ದರು.

 ಈ ಸಂದರ್ಭದಲ್ಲಿ ಕುಂದಾಪುರದಲ್ಲಿ ನಡೆದ ಸಾಂಸ್ಕೃತಿಕ ಕಲರವ ನಲ್ಲಿ ಭಾಗವಹಿಸಿದ ಎಲ್ಲಾ ವಕೀಲರನ್ನು ಗೌರವಿಸಲಾಯಿತು.

ಸ್ಪರ್ಧಾ ಫಲಿತಾಂಶ;

ಪ್ರಥಮ : ಶರಣ್ಯ 9ನೇ ತರಗತಿ, ಜಿ. ಪಿ. ಯು. ಸಿ. ವೇಣೂರು

 ದ್ವಿತೀಯ : ಡಿ ಜಿ ಮಹಿಮಾ,8ನೇ ತರಗತಿ, ಎಸ್ ಡಿ ಎಂ ಧರ್ಮಸ್ಥಳ

 ತೃತೀಯ : ಪಲ್ಲವಿ, 10 ನೇ ತರಗತಿ,ಎಸ್ ಡಿ ಎಂ ಆಂಗ್ಲ ಮಾಧ್ಯಮ(CBSC) ಶಾಲೆ ಉಜಿರೆ.

 ತೀರ್ಪುಗಾರರಾಗಿ ವಕೀಲರುಗಳಾದ  ಶ್ರೀ ಶಿವಕುಮಾರ್ ಎಸ್.ಎಂ,  ಶ್ರೀಕೃಷ್ಣ ಶೆಣೈ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿಕೆ ಧನ್ಯವಾದಗೈದರು.

- Advertisement -
spot_img

Latest News

error: Content is protected !!