Wednesday, June 3, 2026
Homeಕರಾವಳಿ ಚಕ್ಕುಲಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಒಂದೂವರೆ ವರ್ಷದ ಮಗು ಸಾವು

 ಚಕ್ಕುಲಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಒಂದೂವರೆ ವರ್ಷದ ಮಗು ಸಾವು

- Advertisement -
- Advertisement -

 ಕೇರಳ: ಚಕ್ಕುಲಿ ಗಂಟಲಲ್ಲಿ ಸಿಕ್ಕಿಕೊಂಡು ಒಂದೂವರೆ ವರ್ಷದ ಮಗುವೊಂದು ಸಾವನಪ್ಪಿದ ಘಟನೆ ಕೇರಳದ ಅಲಪುಳದಲ್ಲಿ ನಡೆದಿದೆ.


ವೈಷ್ಣವ್ ಮೃತ ಬಾಲಕ. ಮಗು ಚಕ್ಕುಲಿಯನು ತಿಂದುಕೊಂಡು ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಚಕ್ಕುಲಿಯನ್ನು ನುಂಗಿಬಿಟ್ಟಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಆತನಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್‍ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಘಟನೆ ಸಂದರ್ಭದಲ್ಲಿ ಮಗು ಹಾಗೂ ಆತನ ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಪಾಲಕ್ಕಾಡ್‍ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು. ಇದೀಗ ಮಗುವನ್ನು ಕಳೆದುಕೊಂಡು ಹೆತ್ತವರ ಆಕ್ರೋಶ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!