Thursday, June 4, 2026
Homeಕರಾವಳಿಸುಳ್ಯದಲ್ಲಿ ವಿದ್ಯಾರ್ಥಿಯೋರ್ವ ನಾಪತ್ತೆ

ಸುಳ್ಯದಲ್ಲಿ ವಿದ್ಯಾರ್ಥಿಯೋರ್ವ ನಾಪತ್ತೆ

- Advertisement -
- Advertisement -

ಸುಳ್ಯ: ಬೆಳ್ಳಾರೆ ಪೆರುವಾಜೆಯ ಚೆನ್ನಾರ್ ಕುಂಡಡ್ಕ ಬಳಿಯಲ್ಲಿ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ನಡೆದಿದೆ.

ಹನೀಫ್ ಎಂಬವರ ಮಗ ಅಬೂಬಕ ಬಿಲಾಲ್ ಕಾಣೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಚೆನ್ನಾರಿನ ಕುಂಡಡ್ಕ ನಿವಾಸಿಯಾಗಿರುವ ಅಬೂಬಕ ಬಿಲಾಲ್ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲಕ ಎಂದಿನಂತೆ ಬೆಳಗೆದ್ದು ಶಾಲೆಗೆ ಹೋಗಿ ಮತ್ತೆ ತಿರುಗ ಸಂಜೆ ಮಸೀದಿಗೆ ಬಂದಿದ್ದು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋರಟ ಬಿಲಾಲ್ ಮತ್ತೆ ಬರಲಿಲ್ಲ ಎನ್ನಲಾಗಿದೆ.

ಅಬೂಬಕ ಬಿಲಾಲ್ ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ. ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡಬೇಕಾಗಿ ಮನೆಯವರು ಕೇಳಿಕೊಂಡಿದ್ದಾರೆ.

- Advertisement -

Latest News

error: Content is protected !!