Saturday, June 6, 2026
Homeಕರಾವಳಿಸುಳ್ಯ; ಮನೆಯವರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾಗಲೇ ಕುಸಿದು ಬಿದ್ದು ಗ್ರಾ.ಪಂ.ಸದಸ್ಯ ನಿಧನ

ಸುಳ್ಯ; ಮನೆಯವರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾಗಲೇ ಕುಸಿದು ಬಿದ್ದು ಗ್ರಾ.ಪಂ.ಸದಸ್ಯ ನಿಧನ

- Advertisement -
- Advertisement -

ಸುಳ್ಯ; ಮನೆಯವರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾಗಲೇ ಕುಸಿದು ಬಿದ್ದ ಗ್ರಾ.ಪಂ.ಸದಸ್ಯ ಸಾವನ್ನಪ್ಪಿರುವ ಘಟನೆ ಸುಳ್ಯದ ಸಂಪಾಜೆಯಲ್ಲಿ ನಡೆದಿದೆ.

ಸಂಪಾಜೆ ಗ್ರಾಮ ಪಂಚಾಯತ್ 1ನೇ ವಾರ್ಡ್ ಸದಸ್ಯ ತಲವರ್ ಷಣ್ಮುಗಂ( 62) ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟವರು. ಷಣ್ಮುಗಂ ಕುಟುಂಬದೊಂದಿಗೆ ದೀಪಾವಳಿ ಸಂಭ್ರಮದಲ್ಲಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆ ಸೇರಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಇನ್ನು ಶನಿವಾರ ಸಂಜೆ ಸಂಪಾಜೆಯ ಕಲ್ಲುಗುಂಡಿಯಲ್ಲಿ ಟೈಲರ್ ಆಗಿದ್ದ ಅಬಿರ ನಾಗೇಶ್ ಅನ್ನುವ ವ್ಯಕ್ತಿಯೊಬ್ಬರು ಕೂಡ ದಿಢೀರ್ ಹೃದಯಾಘಾತದಿಂದ ನಿಧನರಾಗಿದ್ದರು.

- Advertisement -

Latest News

error: Content is protected !!