Saturday, June 13, 2026
Homeಕರಾವಳಿಉಡುಪಿಉಡುಪಿ: ಬಟ್ಟೆ ಮಳಿಗೆ ಸಿಬ್ಬಂದಿಯಿಂದ ಆಟೋ ಚಾಲಕನ ಮೇಲೆ ಹಲ್ಲೆ ಯತ್ನ

ಉಡುಪಿ: ಬಟ್ಟೆ ಮಳಿಗೆ ಸಿಬ್ಬಂದಿಯಿಂದ ಆಟೋ ಚಾಲಕನ ಮೇಲೆ ಹಲ್ಲೆ ಯತ್ನ

- Advertisement -
- Advertisement -

ಉಡುಪಿ: ಆಟೋ ಚಾಲಕನ ಮೇಲೆ ಬಟ್ಟೆ ಮಳಿಗೆ ಸಿಬ್ಬಂದಿ ಹಲ್ಲೆ ಯತ್ನ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ನಗರದ ಬನ್ನಂಜೆ ರಸ್ತೆಯಲ್ಲಿರುವ ಜಯಲಕ್ಷ್ಮಿ ಬಟ್ಟೆ ಮಳಿಗೆ ಎದುರು ನಿಂತಿದ್ದ ಅಟೋ ಚಾಲಕನಿಗೆ ಮಳಿಗೆ ಸಿಬ್ಬಂದಿ ನಿಂದಿಸಿ ಹಲ್ಲೆಗೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಅಟೋ ಚಾಲಕನ ಕೈಯಲ್ಲಿದ್ದ ಕೀ ಕಸಿದುಕೊಂಡು ಅಟೋ ಹಿಂದೆ ಮತ್ತು ಮುಂದೆ ವಾಹನ ನಿಲ್ಲಿಸಿ ಬೇರೆಡೆ ಹೋಗದಂತೆ ತಡೆದು ದೌರ್ಜನ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಹಲ್ಲೆ ಯತ್ನದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಳಿದ ಅಟೋ ಚಾಲಕರು, ಜಯಲಕ್ಷ್ಮಿ ಬಟ್ಟೆ ಮಳಿಗೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಚಾರಣೆ ನಡೆಸಿ ಬಟ್ಟೆ ಮಳಿಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬಟ್ಟೆ ಮಳಿಗೆಯವರ ದಬ್ಬಾಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸ್‌ಪಿಗೆ ಆಟೋ ಚಾಲಕರು ಮನವಿ ಸಲ್ಲಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!