Thursday, June 4, 2026
Homeಕರಾವಳಿಉಡುಪಿಬ್ರಹ್ಮಾವರ: ಅಂಬೇಡ್ಕರ್ ಭವನದಲ್ಲಿ ಮದ್ಯಪಾನ ಪಾರ್ಟಿ ಆರೋಪ:ವೀಡಿಯೋ ಚಿತ್ರೀಕರಿಸಿದ ಮಹಿಳೆಗೆ ಬೆದರಿಕೆ ಆರೋಪದಡಿ ಎಫ್ ಐಆರ್

ಬ್ರಹ್ಮಾವರ: ಅಂಬೇಡ್ಕರ್ ಭವನದಲ್ಲಿ ಮದ್ಯಪಾನ ಪಾರ್ಟಿ ಆರೋಪ:ವೀಡಿಯೋ ಚಿತ್ರೀಕರಿಸಿದ ಮಹಿಳೆಗೆ ಬೆದರಿಕೆ ಆರೋಪದಡಿ ಎಫ್ ಐಆರ್

- Advertisement -
- Advertisement -

ಬ್ರಹ್ಮಾವರ: ಅಂಬೇಡ್ಕರ್ ಭವನದಲ್ಲಿ ಮದ್ಯಪಾನ ಸಹಿತ ಪಾರ್ಟಿ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ತೆಂಕಭಿರ್ತಿಯಲ್ಲಿ ನಡೆದಿದೆ.

ಡಿಎಸ್ ಎಸ್ ಮುಖಂಡ ಶ್ಯಾಮ ರಾಜ್ ಭಿರ್ತಿ ಎಂಬವರ ಮಗ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅಭಿನಂದನಾ ಕಾರ್ಯಕ್ರಮದ ಬಳಿಕ ಪೂರ್ವಾನುಮತಿ ಇಲ್ಲದೇ ಮದ್ಯ ಪಾನದ ಪಾರ್ಟಿ ನಡೆಸಲಾಗಿದೆ ಎಂದು ಆರೋಪ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ್ದ ಸವಿತಾ ಎಂಬ ಮಹಿಳೆ ಮೊಬೈಲ್ ಫೋನ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದು ಅವರಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -

Latest News

error: Content is protected !!