Thursday, June 4, 2026
Homeಕರಾವಳಿಬೆಳ್ತಂಗಡಿ; ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆ ಪ್ರಕರಣ; ಬಯಲಾಯಿತು ಸಾವಿನ ಹಿಂದಿನ ಅಸಲೀಯತ್ತು

ಬೆಳ್ತಂಗಡಿ; ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆ ಪ್ರಕರಣ; ಬಯಲಾಯಿತು ಸಾವಿನ ಹಿಂದಿನ ಅಸಲೀಯತ್ತು

- Advertisement -
- Advertisement -

ಬೆಳ್ತಂಗಡಿ; ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಹಿಳೆಯ ಸಾವಿನ ಹಿಂದಿನ ಅಸಲೀಯತ್ತು ಬಯಲಾಗಿದೆ. ಹೆಂಡತಿಯನ್ನು ಗಂಡನೇ ಕೊಲೆ ಮಾಡಿ ಬಾವಿಗೆ ಎಸೆದಿರೋದು ತನಿಖೆ ವೇಳೆ ಗೊತ್ತಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಿನ್ನೆ ಶಶಿಕಲಾ (25) ಎಂಬ ಮಹಿಳೆಯ ಶವ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿತ್ತು. ಸಾವಿನ ಬಗ್ಗೆ ಅನುಮಾನದ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದಾಗ ಶಶಿಕಲಾ ಪತಿ ಸುಧಾಕರನೇ ಕೊಲೆ ಮಾಡಿರೋದು ಅನ್ನೋದು ಗೊತ್ತಾಗಿದೆ

ಶಶಿಕಲಾ ಗಂಡ ಸುಧಾಕರನಿಗೆ ಬೇರೊಂದು ಯುವತಿ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ಕೂಡ ಜಗಳ ನಡೆದು ಸುಧಾಕರ ಶಶಿಕಲಾ  ಕತ್ತು ಹಿಸುಕಿದ್ದಾನೆ. ಈ ವೇಳೆ ಶಶಿಕಲಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಳಿಕ ಬಳಿಕ ಹೆಂಡತಿಯನ್ನು ಬಾವಿಗೆ ಬಿಸಾಡಿದ್ದಾನೆ ಸುಧಾಕರ. ಪೊಲೀಸರ ತನಿಖೆ ವೇಳೆ ಈ ಎಲ್ಲಾ ವಿಚಾರಗಳನ್ನು ಸುಧಾಕರ್ ಬಾಯ್ಬಿಟ್ಟಿದ್ದಾನೆ.

ಇನ್ನು ದಂಪತಿ ಕಳೆದ 7 ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಾಗಿದ್ದರು ಎನ್ನಲಾಗಿದೆ. ದಂಪತಿಗೆ 6 ವರ್ಷದ ಮಗಳಿದ್ದಾಳೆ.

- Advertisement -

Latest News

error: Content is protected !!