Thursday, June 4, 2026
Homeಕರಾವಳಿಪುತ್ತೂರು: ಅನಾರೋಗ್ಯದಿಂದ ಶಾಲಾ ಬಾಲಕ ಸಾವು

ಪುತ್ತೂರು: ಅನಾರೋಗ್ಯದಿಂದ ಶಾಲಾ ಬಾಲಕ ಸಾವು

- Advertisement -
- Advertisement -

ಪುತ್ತೂರು: ಅನಾರೋಗ್ಯದಿಂದ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ, ಸೊರಕೆ ಸಮೀಪ ಪೆರಂಟೋಳು ನಿವಾಸಿ ಸುಪ್ರೀತ್‌(13) ಮೃತ ದುರ್ದೈವಿ. ಸುಪ್ರೀತ್ ನನ್ನು ನ. 1ರಂದು ಅನಾರೋಗ್ಯದ ಹಿನ್ನೆಲೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸುಪ್ರೀತ್‌ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾನೆ.ಸುಪ್ರೀತ್‌ ಮುಂಡೂರು ಗ್ರಾ.ಪಂ.ನ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಮತ್ತು ಕುಂಞ ಮೇಸ್ತ್ರಿ ಅವರ ಪುತ್ರ. ಈತ ಇಬ್ಬರು ಸಹೋದರರನ್ನು ಅಗಲಿದ್ದಾನೆ

 

- Advertisement -

Latest News

error: Content is protected !!