Saturday, June 1, 2024
Homeಕರಾವಳಿಮಂಗಳೂರುಮಂಗಳೂರು; ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ ವ್ಯಕ್ತಿ!

ಮಂಗಳೂರು; ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ ವ್ಯಕ್ತಿ!

spot_img
- Advertisement -
- Advertisement -

ಮಂಗಳೂರು: ನೇತ್ರಾವತಿ ನದಿಯ ಸೇತುವೆ ಮೇಲೆ ವ್ಯಕ್ತಿಯೋರ್ವ ಕಾರು ನಿಲ್ಲಿಸಿ ನದಿಗೆ ಜಿಗಿದ ಘಟನೆ ತೊಕ್ಕೊಟ್ಟು ಸಮೀಪ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಲದ ಪ್ರಶಾಂತ್ (35) ಎಂಬ ವ್ಯಕ್ತಿ ನದಿಗೆ ಜಿಗಿದಿದ್ದು, ತನ್ನ ಕುಟುಂಬದ ಜೊತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು ಎಂದು ಹೇಳಲಾಗಿದೆ.

ಮನೆಯವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ್ದ ಪ್ರಶಾಂತ್, ತೊಕ್ಕೊಟ್ಟು ಸಮೀಪ ನೇತ್ರಾವತಿ ಸೇತುವೆಯ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ನದಿಗೆ ಹಾರಿರುವ ಪ್ರಶಾಂತ್ ಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಕಂಕನಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಶಾಂತ್ ತರಕಾರಿ ವ್ಯಾಪಾರಿ ಎಂದು ಹೇಳಲಾಗಿದ್ದು, ನದಿಗೆ ಜಿಗಿಯಲು ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -
spot_img

Latest News

error: Content is protected !!