Sunday, August 30, 2026
Homeಇತರಕಾಫಿನಾಡಿನಲ್ಲಿ ವಧು ನೋಡಲು ಹೋದ 8 ಮಂದಿಗೆ ಕೊರೊನಾ

ಕಾಫಿನಾಡಿನಲ್ಲಿ ವಧು ನೋಡಲು ಹೋದ 8 ಮಂದಿಗೆ ಕೊರೊನಾ

- Advertisement -
- Advertisement -

ಚಿಕ್ಕಮಗಳೂರು :  ಕೊರೊನಾ ಅನ್ನೋ ಮಹಾಮಾರಿ ಯಾರನ್ನು ಹೇಗೆ ಯಾವಾಗ ಎಲ್ಲಿ ಆವರಿಸಿಕೊಳ್ಳುತ್ತದೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಮನೆಯಿಂದ ಹೊರಗೆ ಹೋದ್ರೆ ಕೊರೊನಾ ಗ್ಯಾರಂಟಿ ಅನ್ನೋ ಸ್ಥಿತಿ ಎದುರಾಗಿದೆ.

ಹೀಗೆ ಕಾಫಿನಾಡಿನಲ್ಲಿ ಹೆಣ್ಣು ನೋಡಲು ಹೋದ 8 ಮಂದಿಗೆ ಕೊರೊನಾ ಇರೋದು ದೃಢ ಪಟ್ಟಿದೆ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ  ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ಕುಟುಂಬದ  ಮೂರು ಹಳ್ಳಿಯ ಸುಮಾರು 20 ಮಂದಿ ಹೆಣ್ಣು ನೋಡೋ ಶಾಸ್ತ್ರಕ್ಕಾಗಿ ಭದ್ರಾವತಿ ಮೂಲದ ವ್ಯಕ್ತಿಯೊಬ್ಬರ ಜೊತೆ ತುಮಕೂರಿಗೆ ತೆರಳಿದ್ದರು. ಆದರೆ ಒಂದೆರಡು ದಿನಗಳಲ್ಲಿ ಅನಾರೋಗ್ಯ ಉಂಟಾಗಿ ಪರೀಕ್ಷೆ ನಡೆಸಿದಾಗ ಕೊರೊನಾ ಇರೋದು ಗೊತ್ತಾಗಿದೆ. ಹೋದ 20 ಮಂದಿಯಲ್ಲಿ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ಸುತ್ತಮುತ್ತಲ ಹಳ್ಳಿಗಳ ಜನರಲ್ಲಿ ಆತಂಕ ಮೂಡಿಸಿದೆ.

- Advertisement -

Latest News

error: Content is protected !!