- Advertisement -
- Advertisement -
ಮಂಗಳೂರು: ಸರಣಿ ಅಪಘಾತವಾಗಿ 6 ವಾಹನಗಳು ಜಖಂ ಆಗಿರುವ ಘಟನೆ ರಾ.ಹೆ.66ರ ಉಳ್ಳಾಲ (ನೇತ್ರಾವತಿ) ಸೇತುವೆಯಲ್ಲಿ ಇಂದು ಸಂಜೆ ನಡೆದಿದೆ.
ಅಪಘಾತದಲ್ಲಿ ನಾಲ್ಕು ಕಾರು, ಒಂದು ಲಾರಿ ಮತ್ತು ಆಟೋ ರಿಕ್ಷಾಗಳಿಗೆ ಹಾನಿಯಾಗಿವೆ. ಆದರೆ, ಯಾರಿಗೂ ಗಾಯ ಅಪಾಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಜೆಯಿಂದ ಸತತವಾಗಿ ಸುರಿದ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಇದರಿಂದ ಸೇತುವೆಯುದ್ದಕ್ಕೂ ರಸ್ತೆ ಬ್ಲಾಕ್ ಆಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರದಿಂದ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರೆ.
- Advertisement -