Thursday, June 4, 2026
Homeಕರಾವಳಿಮೂಡಬಿದರೆ; ಪತ್ರಕರ್ತ, ಯುವ ನ್ಯಾಯವಾದಿ ಹೃದಯಾಘಾತಕ್ಕೆ ಬಲಿ

ಮೂಡಬಿದರೆ; ಪತ್ರಕರ್ತ, ಯುವ ನ್ಯಾಯವಾದಿ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಮೂಡಬಿದರೆ; ಪತ್ರಕರ್ತ, ಯುವ ನ್ಯಾಯವಾದಿಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಪತ್ರಕರ್ತ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ಮೂಡುಬಿದಿರೆಯಲ್ಲಿ ಯುವ ನ್ಯಾಯವಾದಿಯಾಗಿ  ಕೆಲಸ ಮಾಡುತ್ತಿದ್ದರು.ವೇಣುಗೋಪಾಲ ಅವರು ಭಾನುವಾರ ಸಂಜೆ ತನ್ನ ಸಹೋದರಿಯ ಮನೆಗೆ ಹೋಗಿದ್ದರು.ಅಲ್ಲಿ ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ವೇಣು ಗೋಪಾಲ್ ಹಠತ್ ನಿಧನಕ್ಕೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ, ಅನೇಕ ಹಿರಿಯ ಕಿರಿಯ ಪತ್ರಕರ್ತರು ಹಾಗೂ ಮೂಡುಬಿದಿರೆ ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -

Latest News

error: Content is protected !!