Tuesday, June 9, 2026
Homeಕರಾವಳಿಮಂಗಳೂರು: ಮನೆಯಂಗಳದಲ್ಲಿ ಪ್ರತ್ಯಕ್ಷವಾದ ಕಾಳಿಂಗ ಸರ್ಪಕ್ಕೆ ಗಮನಿಸದೇ ತುಳಿದ ಮನೆಯೊಡತಿ

ಮಂಗಳೂರು: ಮನೆಯಂಗಳದಲ್ಲಿ ಪ್ರತ್ಯಕ್ಷವಾದ ಕಾಳಿಂಗ ಸರ್ಪಕ್ಕೆ ಗಮನಿಸದೇ ತುಳಿದ ಮನೆಯೊಡತಿ

- Advertisement -
- Advertisement -

ಮಂಗಳೂರು: ಮನೆಯಂಗಳದಲ್ಲಿ ಪ್ರತ್ಯಕ್ಷವಾದ ಕಾಳಿಂಗ ಸರ್ಪಕ್ಕೆ ಗಮನಿಸದೇ ಮನೆಯೊಡತಿ ತುಳಿದ ಘಟನೆ ತಾಲೂಕಿನ ಪಂಜಿಕಲ್ ನಲ್ಲಿ ನಡೆದಿದೆ.

ತೋಟದಿಂದ ಮನೆಕಡೆ ಬರುವಾಗ ರೋಹಿಣಿ ಎಂಬವರು ಗೊತ್ತಿಲ್ಲದೇ ಕಾಳಿಂಗನ‌ ಮೇಲೆ ಕಾಲಿಟ್ಟಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರಿಂಗ ಕಾಳಿಂಗ ಸರ್ಪ ಕೋಪಗೊಂಡಿದೆ.ಕೂಡಲೇ ಮನೆ ಮಂದಿ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.

ಕೋಪದಿಂದಿದ್ದ ಕಾಳಿಂಗ ಸರ್ಪ ಸತತ ಕಾರ್ಯಾಚರಣೆ ಬಳಿಕ ಕಿರಣ್ ಸೆರೆ ಹಿಡಿದಿದ್ದಾರೆ. ಕಾಳಿಂದ ಸರ್ಪ ಸುಮಾರು ಸುಮಾರು 12 ಫೀಟ್ ಉದ್ದವಿತ್ತು ಎನ್ನಲಾಗಿದೆ.  ಕಾಳಿಂಗವನ್ನು ಹಿಡಿದು ಬಳಿಕ ಸುರಕ್ಷಿತವಾಗಿ ಕಾಳಿಂಗ ಕಾಡಿಗೆ  ಬಿಡಲಾಗಿದೆ.

- Advertisement -

Latest News

error: Content is protected !!