Sunday, October 18, 2026
Homeಕರಾವಳಿಪುತ್ತೂರು ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗಿರುವ ಖಾಸಗಿ ಫೋಟೋ ವೈರಲ್

ಪುತ್ತೂರು ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗಿರುವ ಖಾಸಗಿ ಫೋಟೋ ವೈರಲ್

- Advertisement -
- Advertisement -

ಪುತ್ತೂರಿನ ಬಿಜೆಪಿ ಕಾರ್ಯಕರ್ತ ನವೀನ್ ಕೈಕಾರ ಅವರು ಮಹಿಳೆಯೊಂದಿಗಿರುವ ಖಾಸಗಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ದೂರು ದಾಖಲಾಗಿದೆ.

ನವೀನ್ ರೈ ಕೈಕಾರ ಅವರು ಸಂಜೀವ ಮಠಂದೂರು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಫೋಟೋದಲ್ಲಿ ನವೀನ್ ರೈ ರೂಂ ಒಂದರಲ್ಲಿ ಮಹಿಳೆಯೊಂದಿಗೆ ಸೆಲ್ಫಿ ಫೋಟೋ ತೆಗಿದಿದ್ದಾರೆ. ಇನ್ನು ಫೋಟೋ ವೈರಲ್ ಆಗುತ್ತಿದ್ದಂತೆ ನವೀನ್ ರೈ ಕೈಕಾರ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತನ್ನ ಹಾಗೂ ಬೇರೆ ಮಹಿಳೆಯ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಪುತ್ತಿಲ ಪರಿವಾರ ಗ್ರೂಪಿನಲ್ಲಿ ನನ್ನ ಪೋಟೋ ಹಾಗೂ ಬೇರೆ ಹುಡುಗಿಯ ಪೋಟೋವನ್ನು ಒಟ್ಟಿಗೆ ಸೇರಿಸಿ, ನನ್ನ ಗೌರವಕ್ಕೆ ಧಕ್ಕೆಯಾಗಿದ್ದು,  ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1 ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿರುವುದಾಗಿ ದೂರು ದಾಖಲಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

 

- Advertisement -

Latest News

error: Content is protected !!