Friday, June 5, 2026
Homeಕರಾವಳಿಬಂಟ್ವಾಳ; ಕೆರೆಗೆ ಹಾರಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲೀಕ ಆತ್ಮಹತ್ಯೆ

ಬಂಟ್ವಾಳ; ಕೆರೆಗೆ ಹಾರಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲೀಕ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ; ಕೆರೆಗೆ ಹಾರಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಪರ್ಲೊಟ್ಟು ಎಂಬಲ್ಲಿ ನಡೆದಿದೆ. ಸೂರಿಕುಮೇರ್ ನಿವಾಸಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಮೃತ ದುರ್ದೈವಿ.

ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿಯನ್ನು ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಗೈದಿರಬೇಕು ಎಂಬ ಶಂಕೆಯಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ. ಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮುಂದುವರೆಸಿದ್ದಾರೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

- Advertisement -

Latest News

error: Content is protected !!