Wednesday, June 3, 2026
Homeತಾಜಾ ಸುದ್ದಿಚೈತ್ರಾ ವಂಚನೆ ಪ್ರಕರಣದಲ್ಲಿ ನಾನು ಚೈತ್ರಾ ಪ್ಲ್ಯಾನ್ ಪ್ರಕಾರ ನಡೆದುಕೊಂಡಿದ್ದೇನೆ, ನನ್ನದೇನು ತಪ್ಪಿಲ್ಲ; ಸಿಸಿಬಿ ಪೊಲೀಸರ...

ಚೈತ್ರಾ ವಂಚನೆ ಪ್ರಕರಣದಲ್ಲಿ ನಾನು ಚೈತ್ರಾ ಪ್ಲ್ಯಾನ್ ಪ್ರಕಾರ ನಡೆದುಕೊಂಡಿದ್ದೇನೆ, ನನ್ನದೇನು ತಪ್ಪಿಲ್ಲ; ಸಿಸಿಬಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ಅಭಿನವ ಹಾಲಶ್ರೀ

- Advertisement -
- Advertisement -

ಬೆಂಗಳೂರು: ಚೈತ್ರಾ ವಂಚನೆ ಪ್ರಕರಣದಲ್ಲಿ ನಾನು ಚೈತ್ರಾ ಪ್ಲ್ಯಾನ್ ಪ್ರಕಾರ ನಡೆದುಕೊಂಡಿದ್ದೇನೆ, ನನ್ನದೇನು ತಪ್ಪಿಲ್ಲ ಎಂದು ಸಿಸಿಬಿ ಪೊಲೀಸರ ಮುಂದೆ ಅಭಿನವ ಹಾಲಶ್ರೀ ತಪ್ಪು ಒಪ್ಪಿಕೊಂಡಿದ್ದಾರೆ.

ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನಾನು ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಹಣ ಪಡೆದಿದ್ದು ನಿಜ ಮತ್ತು ಆ ಹಣ ಎಂಎಎಲ್‌ಎ ಟಿಕೆಟ್ ವಿಚಾರವಾಗಿ ಪಡೆದಿದ್ದೆ.  ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೇ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ, ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ  ಮಾಡಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

- Advertisement -

Latest News

error: Content is protected !!