Tuesday, June 9, 2026
Homeತಾಜಾ ಸುದ್ದಿಇನ್ನು ಮುಂದೆ ಕಾವೇರಿ ಸರ್ಕಾರಿ ಬಂಗಲೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ

ಇನ್ನು ಮುಂದೆ ಕಾವೇರಿ ಸರ್ಕಾರಿ ಬಂಗಲೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಸರ್ಕಾರಿ ಬಂಗಲೆಯನ್ನು ತಮ್ಮ ಅಧಿಕೃತ ‌ನಿವಾಸವನ್ನಾಗಿ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿಯಿಂದ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ಸರ್ಕಾರಿ ನಿವಾಸದಲ್ಲಿ ಸಿಎಂ ವಾಸ್ತವ್ಯ ಆರಂಭಿಸಿದ್ದು, ಸೋಮವಾರವೇ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಲಕ್ಷ್ಮೀ ಪೂಜೆ ನಡೆದಿದೆ.

ಬಂಗಲೆ ನವೀಕರಣಗೊಂಡ ಬಳಿಕ ಸಿಎಂ ಕುಟುಂಬ ಲಕ್ಷ್ಮೀ ಪೂಜೆ ನೆರವೇರಿಸಿ ಗೃಹ ಪ್ರವೇಶ ಮಾಡಿದೆ.ಇನ್ನು ಮುಂದೆ ಕಾವೇರಿ ನಿವಾಸದಲ್ಲೇ ಸಾರ್ವಜನಿಕರನ್ನು ಸಿಎಂ ಭೇಟಿ ಮಾಡಲಿದ್ದು, ನಿವಾಸದ ಪ್ರವೇಶ ದ್ವಾರದ ಎದುರು ವ್ಯವಸ್ಥೆ ಕಲ್ಪಿಸಲಾಗಿದೆ.

ವಿಪಕ್ಷ ನಾಯಕರಾಗಿದ್ದಾಗಿನಿಂದಲೂ ಸಿದ್ದರಾಮಯ್ಯ ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ ವನ್ ಸರ್ಕಾರಿ ನಿವಾಸದಲ್ಲಿ ವಾಸ್ತವ್ಯ ಇದ್ದರು.

ಕಾವೇರಿ ನಿವಾಸದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಸ್ತವ್ಯ ಹೂಡಿದ್ದರು.

- Advertisement -

Latest News

error: Content is protected !!