Friday, June 26, 2026
Homeಪ್ರಮುಖ-ಸುದ್ದಿಕಲಬುರಗಿಯಲ್ಲೊಂದು ವಿಚಿತ್ರ ಘಟನೆ; ಎರಡು ತಿಂಗಳಲ್ಲಿ ಬಾಲಕನೊಬ್ಬನಿಗೆ 12 ಬಾರಿ ಕಚ್ಚಿದ ಹಾವು

ಕಲಬುರಗಿಯಲ್ಲೊಂದು ವಿಚಿತ್ರ ಘಟನೆ; ಎರಡು ತಿಂಗಳಲ್ಲಿ ಬಾಲಕನೊಬ್ಬನಿಗೆ 12 ಬಾರಿ ಕಚ್ಚಿದ ಹಾವು

- Advertisement -
- Advertisement -

ಕಲಬುರಗಿಯಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಎರಡು ತಿಂಗಳಲ್ಲಿ ಬಾಲಕನೊಬ್ಬನಿಗೆ 12 ಬಾರಿ ಹಾವು ಕಚ್ಚಿದೆ.ಹಾವಿನ ದ್ವೇಷ 12 ವರ್ಷ ಎಂಬ ಗಾದೆ ಮಾತಿನಂತೆ  ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ ಎಂಬ ಹುಡುಗನಿಗೆ ಎರಡು ತಿಂಗಳಲ್ಲಿ ಹಾವೊಂದು ಬರೋಬ್ಬರಿ ಒಂಬತ್ತು ಬಾರಿ ಕಚ್ಚಿದೆ.

ಜುಲೈ 3 ರಂದು ಬಾಲಕನಿಗೆ ಮೊದಲ ಬಾರಿ ಹಾವು ಕಡಿದಿತ್ತು.ನಂತದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಡಿಸ್ಚಾರ್ಜ್ ಆದ ಮೂರು ದಿನದಲ್ಲೇ ಮತ್ತೊಮ್ಮೆ ಹಾವು ಕಡಿದಿದೆ. ಒಟ್ಟು ಒಂಬತ್ತು ಬಾರಿ ಹಾವು ಕಡಿದಿದೆ ಎಂದು ಬಾಲಕ ಹೇಳುತ್ತಾನೆ.ಆರು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಮೂರು ಬಾರಿ ನಾಟಿ ಔಷಧೀಯ ಚಿಕಿತ್ಸೆ ಕೊಡಿಸಲಾಗಿದೆ.

ಕಡೆಗೆ ಪೋಷಕರು ಹಾವಿಗೆ ಹೆದರಿ ಹಲಕರ್ಟಿ ಗ್ರಾಮದಿಂದ ವಾಡಿ ಎಂಬ ಊರಿಗೆ ವಲಸೆ ಹೋದರು.ಅಲ್ಲಿ ಮನೆ ಮಾಡಿಕೊಂಡು ಇದ್ದರು.ಅಲ್ಲಿಯು ಕೂಡ ಹಾವು ಆ ಹುಡುಗನಿಗೆ ಕಚ್ಚಿದೆ.ಆ ಹಾವು ಪೋಷಕರಿಗೆ ,ಬೇರೆ ಜನರಿಗೆ ಕಾಣಿಸಿಕೊಂಡಿಲ್ಲ.ಇದೀಗ ಈ ಪ್ರಕರಣ ಅಚ್ಚರಿಗೆ ಕಾರಣವಾಗಿದ್ದು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

- Advertisement -

Latest News

error: Content is protected !!