Saturday, June 6, 2026
Homeಕರಾವಳಿಸುಬ್ರಹ್ಮಣ್ಯ:  ಹಣ ಪಣಕ್ಕಿಟ್ಟು ಲೂಡೋ ಆಡುತ್ತಿದ್ದಾಗ ಪೊಲೀಸರ ದಾಳಿ

ಸುಬ್ರಹ್ಮಣ್ಯ:  ಹಣ ಪಣಕ್ಕಿಟ್ಟು ಲೂಡೋ ಆಡುತ್ತಿದ್ದಾಗ ಪೊಲೀಸರ ದಾಳಿ

- Advertisement -
- Advertisement -

ಸುಬ್ರಹ್ಮಣ್ಯ:  ಹಣ ಪಣಕ್ಕಿಟ್ಟು ಲೂಡೋ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ  ಬಸ್ಸು ನಿಲ್ದಾಣದ ಬಳಿ ನಡೆದಿದೆ.

ಹಣ ಪಣಕ್ಕಿಟ್ಟು ಲೂಡೋ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ದಾಳಿ ಮಾಡಿ ಕಿರಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಆತ ಯಾವುದೇ ಪರವಾನಿಗೆ ಇಲ್ಲದೇ ಲೂಡೋ ಆಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಇದೇ ವೇಳೆ ಆಟದಲ್ಲಿ ನಿರತರಾಗಿದ್ದ ಕುಮಾರ್ ಗಡಿಕಲ್ಲು , ಅವಿನ್ ಗಡಿಕಲ್ಲು, ಲಕ್ಷ್ಮಣ ಕಡೋಡಿ ಓಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ದಾಳಿ ವೇಳೆ 1350 ರೂಪಾಯಿ ನಗದು, ಆಟಕ್ಕೆ ಉಪಯೋಗಿಸಿದ ಲೂಡೋ ದಾಳ-1, ಲೂಡೋ ಬೋರ್ಡ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!