Thursday, June 4, 2026
Homeತಾಜಾ ಸುದ್ದಿತೆನೆ ಹೊತ್ತ ಮಹಿಳೆಗೆ “ಕೈ” ಕೊಟ್ಟು ಕಾಂಗ್ರೆಸ್ ಸೇರಿದ ಆಯನೂರು ಮಂಜುನಾಥ್

ತೆನೆ ಹೊತ್ತ ಮಹಿಳೆಗೆ “ಕೈ” ಕೊಟ್ಟು ಕಾಂಗ್ರೆಸ್ ಸೇರಿದ ಆಯನೂರು ಮಂಜುನಾಥ್

- Advertisement -
- Advertisement -

ಬೆಂಗಳೂರು: ಮಾಜಿ ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಮುಖಂಡ ಆಯನೂರು ಮಂಜುನಾಥ್ ಕೊನೆಗೂ ತೆನೆ ಹೊತ್ತ ಮಹಿಳೆಗೆ ಕೈ ಕೊಟ್ಟು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಯನೂರು ಮಂಜುನಾಥ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದರು.

ಈ ವೇಳೆ ಮಾತನಾಡಿದ ಆಯನೂರು ಮಂಜುನಾಥ್, ʼʼಕಾರ್ಮಿಕರ ಹೋರಾಟದ ಹಿನ್ನಲೆಯಿಂದ ಬಂದವನು ನಾನು. ಇವರ ಯೋಜನೆಗಳನ್ನು ನೋಡಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಾನು ಮತ್ತು ನನ್ನ ಗೆಳೆಯರು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.

- Advertisement -

Latest News

error: Content is protected !!