- Advertisement -
![]()
- Advertisement -
ಬೆಳ್ತಂಗಡಿ: ಅಡುಗೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಮುಂಡಾಜೆ ಗ್ರಾಮದ ಕೂಳೂರು ಶಾರದಾ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ರಾಘವೇಂದ್ರ ಮೆಹೆಂದಳೆ (32) ನಾಪತ್ತೆಯಾದವರು.
ರಾಘವೇಂದ್ರ ಅವರು ಆ. 20ರಂದು ಸ್ಥಳೀಯವಾಗಿ ಅಡುಗೆ ಕೆಲಸಕ್ಕೆ ಹೋಗಿದ್ದ ರಾಘವೇಂದ್ರ ಮೆಹೆಂದಳೆ ಅವರು ಬಳಿಕ ಕಾರು ವಾಶ್ ಕೊಡಲಿದ್ದು, ಬಳಿಕ ಕ್ಯಾಟರಿಂಗ್ ಕೆಲಸ ಇದೆ ಮನೆಗೆ ಬರುವಾಗ ತಡವಾಗಬಹುದು ಎಂದು ಹೇಳಿದ್ದರು.
ಮಧ್ಯಾಹ್ನ 12.30ರ ಸುಮಾರಿಗೆ ಮೊಬೈಲ್‌ಗೆ ಕರೆ ಮಾಡಿ ತಡವಾಗಬಹುದು ಎಂದು ಹೇಳಿದ್ದರು. ನಂತರ ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಅವರ ಪತ್ನಿ ಶೀಲಾ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆ. 21ರಂದು ದೂರು ನೀಡಿದ್ದಾರೆ.
- Advertisement -


