Sunday, June 7, 2026
Homeತಾಜಾ ಸುದ್ದಿಚಂದ್ರಯಾನ 3 ಯಶಸ್ವಿ ಹಿನ್ನೆಲೆ : ಶನಿವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

ಚಂದ್ರಯಾನ 3 ಯಶಸ್ವಿ ಹಿನ್ನೆಲೆ : ಶನಿವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

- Advertisement -
- Advertisement -

ಬೆಂಗಳೂರು: ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.

ಶನಿವಾರ ಸಂಜೆ 5.55ಕ್ಕೆ ಬೆಂಗಳೂರಿನ ಹೆಚ್ಎಎಲ್ ಏರ್ ಪೋರ್ಟ್ ಗೆ ಆಗಮಿಸಲಿರುವ ಮೋದಿ 6.30ರವರೆಗೆ ಏರ್ ಪೋರ್ಟ್ ನಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

ಬಳಿಕ ಸಂಜೆ 6.30 ಕ್ಕೆ ರಸ್ತೆ ಮಾರ್ಗವಾಗಿ ಏರ್ ಪೋರ್ಟ್ ನಿಂದ ಹೊರಟು ರಾತ್ರಿ 7 ಗಂಟೆಗೆ ಇಸ್ರೋಗೆ ಭೇಟಿ ನೀಡಲಿದ್ದಾರೆ.

7 ಗಂಟೆಯಿಂದ 8 ಗಂಟೆಯವರೆಗೆ ಒಂದು ಕಾಲ ಇಸ್ರೋ ಕಚೇರಿಯಲ್ಲಿ ಸಭೆ ನಡೆಸಲಿರುವ ಪ್ರಧಾನಿ ಚಂದ್ರಯಾನ 3 ಉಡ್ಡಯನದಲ್ಲಿ ಕೆಲಸ ನಿರ್ವಹಿಸಿದ ವಿಜ್ಞಾನಿಗಳ ತಂಡವನ್ನು ಭೇಟಿ ಮಾಡಲಿದ್ದಾರೆ.

ನಂತರ ರಾತ್ರಿ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ಪ್ರಧಾನಿ ಮೋದಿ ನಿರ್ಗಮಿಸಲಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಜೋಹಾನ್ಸ್ ಬರ್ಗ್ ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ‌.

- Advertisement -

Latest News

error: Content is protected !!