Thursday, June 4, 2026
Homeಕರಾವಳಿಬೆಳ್ತಂಗಡಿ :ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆಗಸ್ಟ್ 28ರಂದು 'ಬೆಳ್ತಂಗಡಿ ಚಲೋ' ಧರಣಿ

ಬೆಳ್ತಂಗಡಿ :ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆಗಸ್ಟ್ 28ರಂದು ‘ಬೆಳ್ತಂಗಡಿ ಚಲೋ’ ಧರಣಿ

- Advertisement -
- Advertisement -

ಬೆಳ್ತಂಗಡಿ : ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆಗಸ್ಟ್ 28ರಂದು ‘ಬೆಳ್ತಂಗಡಿ ಚಲೋ’ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ ವಸಂತ ಬಂಗೇರ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸೌಜನ್ಯಾಳಿಗೆ ನ್ಯಾಯ ಸಿಗಬಾರದು ಎಂದು ಕೆಲವು ಶಕ್ತಿಗಳು ಆ.28ರಂದು ಧರಣಿ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಅಂದು ರಾಜ್ಯ ಮಟ್ಟದ ಹೋರಾಟ ಬೆಳ್ತಂಗಡಿ ಚಲೋ ನಡೆಯಲಿದೆ. ಸೌಜನ್ಯಾಗಿ ನ್ಯಾಯ ಸಿಗಬೇಕು ಎಂಬ ನಿರೀಕ್ಷೆಯಲ್ಲಿ ಇರುವ ಎಲ್ಲರೂ ಮಹಾಧರಣಿಯಲ್ಲಿ ಭಾಗವಹಿಸಬೇಕು ಎಂದರು.

ಸಿಬಿಐ ನ್ಯಾಯಾಲಯದಲ್ಲಿ ಉಲ್ಲೇಖವಾದ ಕೆಲವು ಅಂಶಗಳಲ್ಲಿ ಸೌಜನ್ಯ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತರ ನಡೆದಿದೆ ಅನುಮಾನ ಬಳಗೊಳಿಸಿದೆ. ಈಗಾಗಲೇ ಈ ವಿಷಯವಾಗಿ ಮುಖ್ಯಮಂತ್ರಿ ಬಳಿ ಚರ್ಚಿಸಿದ್ದು ನಾನು ಪ್ರಸ್ತಾಪ ಮಾಡಿದಂತೆ ತನಿಖೆ ನಡೆಸಿದರೆ ಅಪರಾಧಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಅಲ್ಲದೆ ಇನ್ನೆರಡು ದಿನಗಳಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗುವುದು. ಇದರ ಭಾಗವಾಗಿ ರಾಜ್ಯ ಜನಪರ ಸಂಘಟನೆಗಳ ಪರವಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪರವಾಗಿ ಆಗಸ್ಟ್ 28ರಂದುಬೆಳಿಗ್ಗೆ 10 ಗಂಟೆಗೆ ಚಲೋ ಬೆಳ್ತಂಗಡಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

- Advertisement -

Latest News

error: Content is protected !!