Thursday, June 4, 2026
Homeಕರಾವಳಿಸುಳ್ಯ; ಅರಂತೋಡಿನಲ್ಲಿ ಬಸ್ ನಿಂದ ಬಿದ್ದ ವಿದ್ಯಾರ್ಥಿಯನ್ನು 50 ಮೀಟರ್ ಎಳೆದೊಯ್ದ ಬಸ್

ಸುಳ್ಯ; ಅರಂತೋಡಿನಲ್ಲಿ ಬಸ್ ನಿಂದ ಬಿದ್ದ ವಿದ್ಯಾರ್ಥಿಯನ್ನು 50 ಮೀಟರ್ ಎಳೆದೊಯ್ದ ಬಸ್

- Advertisement -
- Advertisement -

ಸುಳ್ಯ; ಬಸ್ ನಿಂದ ಬಿದ್ದ ವಿದ್ಯಾರ್ಥಿಯನ್ನು 50 ಮೀಟರ್ ವರೆಗೆ  ಬಸ್ ಎಳೆದೊಯ್ದ ಘಟನೆ ಅರಂತೋಡಿನಲ್ಲಿ ನಡೆದಿದೆ.

ಸುಳ್ಯದಿಂದ ಕೊಯ್ನಾಡಿಗೆ ಹೋಗುತ್ತಿದ್ದ ಸರಕಾರಿ ಬಸ್‌ ಕಾಲೇಜು ಬಳಿ ವಿದ್ಯಾರ್ಥಿಗಳನ್ನು ಹತ್ತಿಸಲು ನಿಂತಿದ್ದು ವಿದ್ಯಾರ್ಥಿಗಳು ಹತ್ತಿದ ಬಳಿಕ ಮುಂದಕ್ಕೆ ಸಾಗಿದ ವೇಳೆ ಹತ್ತನೇ ತರಗತಿಯ ಅನಸ್‌ ಎಂಬ ವಿದ್ಯಾರ್ಥಿ ಓಡಿ ಬಂದು ಬಸ್‌ ಹತ್ತುವ ಸಂದರ್ಭ ವಿದ್ಯಾರ್ಥಿ ಆಯತಪ್ಪಿ ಬಿದ್ದನೆನ್ನಲಾಗಿದೆ.

ಆಯ ತಪ್ಪಿ ಬಿದ್ದರೂ ಒಂದು ಕೈಯಿಂದ ಬಸ್ಸಿನ ರಾಡನ್ನು ಹಿಡಿದಿದ್ದ ಆತನ ಕಾಲುಗಳು ನೆಲಕ್ಕೆ ತಾಗಿಕೊಂಡು ಸುಮಾರು 50 ಮೀಟರ್‌ ಹೋದ ಬಳಿಕ ಚಾಲಕನಿಗೆ ವಿಷಯ ತಿಳಿದು ಬಸ್ಸನ್ನು ನಿಲ್ಲಿಸಿದರೆಂದು ತಿಳಿದು ಬಂದಿದೆ. ಘಟನೆ ತಿಳಿದ ಸುಳ್ಯ ಪೊಲೀಸರು ಕಾಲೇಜಿಗೆ ಹೋಗಿ ಮಾಹಿತಿ ಪಡೆದಿದ್ದಾರೆ.

- Advertisement -

Latest News

error: Content is protected !!