Wednesday, June 3, 2026
Homeಕರಾವಳಿಪುತ್ತೂರು: ಮಹಿಳೆಯರಿಬ್ಬರ ಮೇಲೆ ಅಪರಿಚಿತನಿಂದ ಮಾರಣಾಂತಿಕ ಹಲ್ಲೆ

ಪುತ್ತೂರು: ಮಹಿಳೆಯರಿಬ್ಬರ ಮೇಲೆ ಅಪರಿಚಿತನಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರಿಬ್ಬರ ಮೇಲೆ  ಹಲ್ಲೆ ನಡೆಸಿದ ಘಟನೆ ಬಡಗನ್ನೂರಿನಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ಗಿರಿಜಾ ಹಾಗೂ ಸುಲೇಖಾ ಹಲ್ಲೆಗೊಳಗಾದವರು.ಬಡಗನ್ನೂರು ಸಮೀಪದ ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಮಹಿಳೆಯರನ್ನು ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ ಸದಸ್ಯರು ಆಯಂಬುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಕಾರಣ ಮತ್ತು ಹಲ್ಲೆ ನಡೆಸಿದಾತ ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!