Wednesday, June 3, 2026
Homeಕರಾವಳಿಉಡುಪಿಉಡುಪಿ; ಪೊಲೀಸ್ ಅಧಿಕಾರಿ ಮೇಲೆ ಸೀಮೆಎಣ್ಣೆ ಎರಚಲು ಯತ್ನಿಸಿದ ಮಹಿಳೆ ; ಅಂಗಡಿ ಮಾಲಕಿಯ ವಿರುದ್ಧ...

ಉಡುಪಿ; ಪೊಲೀಸ್ ಅಧಿಕಾರಿ ಮೇಲೆ ಸೀಮೆಎಣ್ಣೆ ಎರಚಲು ಯತ್ನಿಸಿದ ಮಹಿಳೆ ; ಅಂಗಡಿ ಮಾಲಕಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಉಡುಪಿ; ಉಡುಪಿ; ಪೊಲೀಸ್ ಅಧಿಕಾರಿ ಮೇಲೆ ಸೀಮೆಎಣ್ಣೆ ಎರಚಲು ಯತ್ನಿಸಿದ ಮಹಿಳೆಯೊಬ್ಬರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಅವರು  ಬೀಜಾಡಿ ಗ್ರಾಮದ ಕೋಟೇಶ್ವರ ಎಂಬಲ್ಲಿರುವ ಫ್ಯಾಶನ್ ಡಿಸೈನ್ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಎಸ್ಸೈ ವಿನಯ್ ಕೊರ್ಲಹಳ್ಳಿ ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿದ್ದ ಸರೋಜ ದಾಸ್(43) ಎಂಬವರನ್ನು ವಿಚಾರಿಸಿದ್ದಾರೆ.ಆಗ ಮಹಿಳೆ ಉದ್ದಟತನದಿಂದ ಮಾತನಾಡಿ ಎಸ್ಸೈ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ..

ಬಳಿಕ ಏಕಾಏಕಿ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಮೈಗೆ ಎರಚಲು ಬಂದಾಗ ಎಸ್ಸೈ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ನಂತರ ಆಕೆ ಸೀಮೆಎಣ್ಣೆಯನ್ನು ಅಲ್ಲಿಯೇ ಕೆಳಗೆ ಹಾಕಿ ಬೆಂಕಿ ಹಾಕಿದ್ದು, ಆಗ ಎಸ್ಸೈ ಮತ್ತು ಸಿಬ್ಬಂದಿ ನಂದಿಸಲು ಮುಂದಾದಾಗ ಆಕೆಯು ಸಮವಸ್ತ್ರಕ್ಕೆ ಕೈ ಹಾಕಿ ಎಳೆದು ದೂಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!