Sunday, August 30, 2026
Homeಕರಾವಳಿತಾಯಿ ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಮೂರು ತಿಂಗಳ ಮಗು ಸಾವು

ತಾಯಿ ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಮೂರು ತಿಂಗಳ ಮಗು ಸಾವು

- Advertisement -
- Advertisement -

ಕೇರಳ; ತಾಯಿ ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಮೂರು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಪಳ್ಳಿಚಲ್‌ ಮೂಲದ ಜಯಕೃಷ್ಣನ್‌ ಮತ್ತು ಜಾನಿಮೋಲ್‌ ದಂಪತಿಯ ಏಕೈಕ ಮಗು ಜಿತೇಶ್‌ ಮೃತ ಕಂದಮ್ಮ.

ತಾಯಿ ಭಾನುವಾರ ಮಗುವಿಗೆ ಹಾಲುಣಿಸಿದ ಬಳಿಕ ಮಲಗಿಸಿದ್ದರು. ಬೆಳಿಗ್ಗೆ ಮಗುವನ್ನು ಎಬ್ಬಿಸಲು ಪ್ರಯತ್ನಿಸಿದಾಗ ಸ್ಪಂದಿಸದ ಹಿನ್ನಲೆ ಪೋಷಕರು ಬೆಳಗ್ಗೆ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ನಾಡಿಮಿಡಿತ ಕಡಿಮೆಯಾದ ಕಾರಣ, ಮೂರು ತಿಂಗಳ ಮಗುವನ್ನು ಎಸ್‌ಐಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ವೇಳೆಗೆ ಮಗು ಸಾವನ್ನಪ್ಪಿದೆ. ಎದೆ ಹಾಲು ಮಗುವಿನ ಶ್ವಾಸಕೋಶದಲ್ಲಿ ತುಂಬಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!