Thursday, June 25, 2026
Homeಕರಾವಳಿಬಂಟ್ವಾಳ:ಕಳ್ಳತನ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ:ಕಳ್ಳತನ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ:ಕಳ್ಳತನ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರ ಬಂದು ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತ್ರತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಪುದು ಗ್ರಾಮದ ಕುಮ್ಡೆಲು ನಿವಾಸಿ ಕೃಷ್ಣ ಬಂಧಿತ ಆರೋಪಿ.

ಕೃಷ್ಣ ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.  ಬಳಿಕ ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ಈತನನ್ನು ಪೋಲೀಸ್ ಇನ್ಸ್ ಪೆಕ್ಟರ್ ಎಚ್ .ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಸ್.ಐ.ಹರೀಶ್ ಹಾಗೂ ಸಿಬ್ಬಂದಿಯಾದ ಗಣೇಶ್ ಪ್ರಸಾದ್, ರಾಧಾಕೃಷ್ಣನ್, ಯೋಗೇಶ್ ಡಿ.ಎಲ್, ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಬಡಗಮಿಜಾರು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.ನಂತರ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Latest News

error: Content is protected !!