Sunday, June 2, 2024
Homeಕರಾವಳಿಬೆಳ್ತಂಗಡಿ: ಉಜಿರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ: ಉಜಿರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಿಡ್ಲೆ ಗ್ರಾಮದಲ್ಲಿ ನಡೆದಿದೆ. ಶ್ರೇಯಸ್ ಉಪಾಧ್ಯಾಯ (38) ನಾಪತ್ತೆಯಾದವರು.

ಶ್ರೇಯಸ್ ಉಪಾಧ್ಯಾಯ ಆ.4 ರಂದು ಬೆಳಗ್ಗೆ 11:45ರ ವೇಳೆಗೆ ನಿಡ್ಲೆ ಗ್ರಾಮದ ಮನೆಯಿಂದ ಉಜಿರೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಆದರೆ ವಾಪಾಸ್ ಮನೆಗೆ ಬಂದಿಲ್ಲ. ಅಲ್ಲದೇ ಅವರ ಬಳಿ ಇದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಮಂದಿ ಹುಡುಕಾಟ ನಡೆಸಿ ನಂತರ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ದಿನ ಶ್ರೇಯಸ್ ಉಪಾಧ್ಯಾಯ ಹಸಿರು ಬಣ್ಣದ ಟಿ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ತುಳು, ಕನ್ನಡ ಇಂಗ್ಲಿಷ್ ಹಿಂದಿ ಮಾತನಾಡಬಲ್ಲರು. ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

- Advertisement -
spot_img

Latest News

error: Content is protected !!