Saturday, June 6, 2026
Homeಕರಾವಳಿಸೌಜನ್ಯ ಪ್ರಕರಣದ ನಿರಪರಾಧಿ ಸಂತೋಷ್ ರಾವ್ ಮನೆಗೆ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ; ಸಂತೋಷ್ ರಾವ್...

ಸೌಜನ್ಯ ಪ್ರಕರಣದ ನಿರಪರಾಧಿ ಸಂತೋಷ್ ರಾವ್ ಮನೆಗೆ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ; ಸಂತೋಷ್ ರಾವ್ ತಂದೆಯ ಪಾದಪೂಜೆ ನೆರವೇರಿಸಿದ ಮಹೇಶ್ ಶೆಟ್ಟಿ

- Advertisement -
- Advertisement -

ಧರ್ಮಸ್ಥಳದ ಸೌಜನ್ಯ ಪ್ರಕರಣದ ನಿರಪರಾಧಿ ಸಂತೋಷ್ ರಾವ್ ಮನೆಗೆ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ ನೀಡಿದರು. ಈ ವೇಳೆ  ಸಂತೋಷ್ ರಾವ್ ಅವರ ತಂದೆ ಶಿಕ್ಷಕ ಸುಧಾಕರ ರಾವ್ ಅವರಿಗೆ ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ, ಹೊಸ ಧೋತಿ ತೊಡಿಸಿ, ಪಾದಪೂಜೆ ಮಾಡುವ ಮೂಲಕ ಗುರುವಂದನೆ ಸಲ್ಲಿಸಿದ್ದಾರೆ.

ಸಂತೋಷ್ ರಾವ್ ಅವರ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಅವರ ಮನೆಯ ದುರಸ್ಥಿ ಕಾರ್ಯ ಮಾಡಲು ಪ್ರಾರಂಭಿಸಿದ್ದಾರೆ. ಮನೆಗೆ ಬಣ್ಣ ಬಳಿಯುವ ಕಾರ್ಯ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಒಡನಾಡಿ ಸಂಸ್ಥೆಯ ಮುಖ್ಯಸ್ಥರು, ಇತಿಹಾಸ ಸಂಶೋಧಕ ತಮ್ಮಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!