Saturday, June 27, 2026
Homeಕರಾವಳಿಮಂಗಳೂರು; ನನ್ನ ಚಿನ್ನ ಕದ್ದಿದ್ದಾರೆಂದು ಗಂಡನ ವಿರುದ್ಧವೇ ದೂರು ನೀಡಿದ ಮಹಿಳೆ

ಮಂಗಳೂರು; ನನ್ನ ಚಿನ್ನ ಕದ್ದಿದ್ದಾರೆಂದು ಗಂಡನ ವಿರುದ್ಧವೇ ದೂರು ನೀಡಿದ ಮಹಿಳೆ

- Advertisement -
- Advertisement -

ಮಂಗಳೂರು; ಪತಿ ನನ್ನ ಚಿನ್ನ ಕದ್ದಿದ್ದಾರೆಂದು ಗಂಡನ ವಿರುದ್ಧವೇ ಮಹಿಳೆ ದೂರು ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೆನಿಶಾ ನೊರೊನ್ಹಾ ಎಂಬ ಮಹಿಳೆ ಪತಿ ಮೊಹಮ್ಮದ್ ಇಲಿಯಾಸ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಆತನಿಗೆ ಸಹಕರಿಸಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲಾಗಿದೆ.

ನಾನು ನನ್ನ ಗಂಡನೊಂದಿಗೆ ಮಂಗಳೂರು ಕೆಪಿಟಿ ವ್ಯಾಸನಗರದ ಫ್ಲಾಟ್ನಲ್ಲಿ ವಾಸವಿದ್ದು, ಇತ್ತೀಚೆಗೆ ತನಗೆ ಹಾಗೂ ಪತಿ ನಡುವೆ ಗಲಾಟೆಯಾದ ಕಾರಣ ನಾನು ತಾಯಿಯ ಮನೆಯಲ್ಲಿದ್ದೆ, ಗಂಡ ಇರುವ ಫ್ಲ್ಯಾಟ್ ನಲ್ಲಿ ತನಗೆ ಸೇರಿದ್ದು ಸುಮಾರು 75 ಪವನ್ ಚಿನ್ನವನ್ನು ಲಾಕರ್ ನಲ್ಲಿ ಇಟ್ಟಿದ್ದು, ಇತ್ತೀಚೆಗೆ ಫ್ಲ್ಯಾಟ್ ಗೆ ತೆರಳಿ ನೋಡಿದಾಗ ಚಿನ್ನ ನಾಪತ್ತೆಯಾಗಿದ್ದು, ಅದನ್ನು ನನ್ನ ಗಂಡನೇ ಕದ್ದಿದ್ದಾನೆ ಎಂದು ರೆನಿಶಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!