Thursday, June 4, 2026
Homeಕರಾವಳಿಸುಳ್ಯ: ಅರಂತೋಡಿನಲ್ಲಿ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಳ್ಯ: ಅರಂತೋಡಿನಲ್ಲಿ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಸುಳ್ಯ: ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ನಡೆದಿದೆ.ಮೂಸಾ ಎಂಬವರ ಪುತ್ರ ಹನ್ಸೀಫ್ (17) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಹನ್ಸೀಫ್ ಅವರ ತಾಯಿ ಎರ್ನಾಕುಲಂ ಗೆ ಹೋಗಿದ್ದ ವೇಳೆ ಮನೆಯಲ್ಲಿ ಈತ ಒಬ್ಬನೆ ಇದ್ದನು. ಸಂಜೆ ಅರಂತೋಡಿನ ತನ್ನ ಅಜ್ಜಿಗೆ ಹೋಗಿ ಮಾತನಾಡಿ ಮನೆಗೆ ಬಂದಿದ್ದ ಎನ್ನಲಾಗಿದೆ.ರಾತ್ರಿ ಕರೆ ಮಾಡಿದಾಗ ಮಾತನಾಡಿದ್ದು ಬಳಿಕ ತಾಯಿ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಅರಂತೋಡಿನ ಅಜ್ಜಿ ಮನೆಗೆ ಫೋನ್ ಮಾಡಿ ಹನ್ಸೀಫ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದರು. ಆತನ ಮಾವ ಬಿಳಿಯಾರಿಗೆ ಬಂದು ನೋಡಿದಾಗ ಈತ ಫ್ಯಾನಿಗೆ ನೇಣು ಹಾಕಿರುವುದು ಗೊತ್ತಾಗಿದೆ ಎನ್ನಲಾಗಿದೆ.

ಇನ್ನು ಎಸ್ಸೆಸೆಲ್ಸಿ ಓದುತ್ತಿದ್ದ ಹನ್ಸೀಫ್ ಮುಂದೆ ಓದಲು ಮನಸ್ಸಿಲ್ಲ ಎನ್ನುತ್ತಿದ್ದ ಎನ್ನಲಾಗಿದೆ. ಅಲ್ಲದೇ ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿ ನಿಂತಿಕಲ್ಲಿನ ಸಂಸ್ಥೆಯಲ್ಲಿ ಐಟಿಐಗೆ  ಆತನನ್ನು ದಾಖಲಾತಿ ಮಾಡಲಾಗಿತ್ತು. ಇಂದು ತರಗತಿ ಆರಂಭವಾಗಿ ಆತನು ತರಗತಿಗೆ ತೆರಳಬೇಕಾಗಿತ್ತು. ಆದರೆ ಅಷ್ಟರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!