Thursday, June 4, 2026
Homeಕರಾವಳಿಉಡುಪಿಉಡುಪಿ: ಲಾಕ್ ಡೌನ್ ನಿಂದಾಗಿ ಖಿನ್ನತೆ, ಕ್ಯಾಂಟೀನ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಆತ್ಮಹತ್ಯೆ

ಉಡುಪಿ: ಲಾಕ್ ಡೌನ್ ನಿಂದಾಗಿ ಖಿನ್ನತೆ, ಕ್ಯಾಂಟೀನ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

‌‌ಉಡುಪಿ: ಲಾಕ್ ಡೌನ್ ಸಮಯದಲ್ಲಿ ಸೂಕ್ತ ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಣಿಯೂರಿನ ಎಳ್ಳೂರಿನಲ್ಲಿ ನಡೆದಿದೆ.

ಅರ್ನಾಲ್ಡ್‌‌ ಡಿ’ಸೋಜಾ (29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಅನಾರ್ಲ್ಡ್‌‌ ಅವರು ಸುಮಾರು ಒಂದು ವರ್ಷದ ಹಿಂದೆ ಗಲ್ಫ್‌‌ನಿಂದ ಹಿಂದಿರುಗಿದ್ದು, ಕಾಪುವಿನ ಕ್ಯಾಂಟೀನ್‌‌ನಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಲಾ‌‌ಕ್‌ಡೌನ್‌ ಹಿನ್ನೆಲೆ ಅವರು ತಮ್ಮ ಪಕ್ಕದ ಮನೆಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.

ರಾತ್ರಿ 9.30ಕ್ಕೆ ಊಟದ ನಂತರ ತಮ್ಮ ಕೊಠಡಿಗೆ ಹೋದವರು ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!