Saturday, June 6, 2026
Homeಕರಾವಳಿಉಡುಪಿಕುಂದಾಪುರ: ಜಲಪಾತದ ಎದುರು ವಿಡಿಯೋ ಮಾಡಲು ಹೋಗಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ ಪ್ರಕರಣ:ನೀರು ಪಾಲಾಗಿದ್ದ...

ಕುಂದಾಪುರ: ಜಲಪಾತದ ಎದುರು ವಿಡಿಯೋ ಮಾಡಲು ಹೋಗಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ ಪ್ರಕರಣ:ನೀರು ಪಾಲಾಗಿದ್ದ ಶರತ್ ಕುಮಾರ್ ಮೃತದೇಹ ಪತ್ತೆ

- Advertisement -
- Advertisement -

ಕುಂದಾಪುರ: ಜಲಪಾತದ ಎದುರು ವಿಡಿಯೋ ಮಾಡಲು ಹೋಗಿ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದ ಯುವಕ  ಶರತ್ ಮೃತದೇಹ ಒಂದು ವಾರಗಳ ಬಳಿಕ ಇಂದು ಪತ್ತೆಯಾಗಿದೆ.


ಕಳೆದ ವಾರ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಿಸುತ್ತಿದ್ದಾಗ ಶರತ್ ಆಕಸ್ಮಿಕವಾಗಿ ಬಿದ್ದು ನದಿ ನೀರುಪಾಲಾಗಿದ್ದ ಶರತ್ ಮೃತದೇಹಕ್ಕಾಗಿ ಕಳೆದ ವಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿತ್ತು. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಜಾಗದಿಂದ 200 ಮೀ ದೂರದಲ್ಲಿ ಕಲ್ಲು ಪೊಟರೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಗನ ಮೃತದೇಹ ಪತ್ತೆಯಾಗುತ್ತಿದ್ದಂತೆ ಮಗ ಬದುಕಿ ಬರಬಹುದು ಎಂಬ ಸಣ್ಣ ನಿರೀಕ್ಷೆಯಲ್ಲಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!