Thursday, June 4, 2026
Homeಕರಾವಳಿಮಂಗಳೂರು: ಮನೆಯಿಂದ ನಗದು ಮತ್ತು ಚಿನ್ನಾಭರಣ ಕಳವು

ಮಂಗಳೂರು: ಮನೆಯಿಂದ ನಗದು ಮತ್ತು ಚಿನ್ನಾಭರಣ ಕಳವು

- Advertisement -
- Advertisement -

ಮಂಗಳೂರು: ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ನೀರುಮಾರ್ಗದಲ್ಲಿ ನಡೆದಿದೆ.

ಜು. 24ರಂದು ಬೆಳಗ್ಗೆ ಮನೆಯವರು ಟೆಕ್ಸ್‌ಟೈಲ್‌ ಅಂಗಡಿಗೆ ಹೋಗಿ ರಾತ್ರಿ 8.30ಕ್ಕೆ ವಾಪಸ್‌ ಬಂದು ಮನೆಯ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಬೆಡ್‌ರೂಮ್‌ನ ಕಿಟಕಿಯ ಸರಳುಗಳನ್ನು, ಕಬ್ಬಿಣದ ಕಪಾಟನ್ನು ಕತ್ತರಿಸಿ 1.40 ಲ.ರೂ.ನಗದು ಹಾಗೂ 32,000 ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿರುವುದು ಗಮನಕ್ಕೆ ಬಂದಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!