Sunday, June 7, 2026
Homeಕರಾವಳಿಉಡುಪಿಉಡುಪಿ ನರ್ಸಿಂಗ್ ಕಾಲೇಜು ವೀಡಿಯೋ ಪ್ರಕರಣ:ಪ್ರಕರಣದಲ್ಲಿ ಎಂಟ್ರಿ ಪಡೆದ ರಾಷ್ಟ್ರೀಯ ಮಹಿಳಾ ಆಯೋಗ

ಉಡುಪಿ ನರ್ಸಿಂಗ್ ಕಾಲೇಜು ವೀಡಿಯೋ ಪ್ರಕರಣ:ಪ್ರಕರಣದಲ್ಲಿ ಎಂಟ್ರಿ ಪಡೆದ ರಾಷ್ಟ್ರೀಯ ಮಹಿಳಾ ಆಯೋಗ

- Advertisement -
- Advertisement -

ನವದೆಹಲಿ: ಉಡುಪಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿಯಾಗಿದೆ.ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ‌ ಸುಂದರ್ ಇಂದು ಸಂಜೆ ಉಡುಪಿಗೆ ಭೇಟಿ ನೀಡಲಿದ್ದಾರೆ.

ಉಡುಪಿ ಕಡೆಗೆ ಹೊರಟಿದ್ದೇನೆ ಎಂದು ಟ್ವೀಟ್ ಮಾಡಿರುವ ಚಲನಚಿತ್ರ ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿಯೂ ಆಗಿರುವ ಖುಷ್ಬೂ ಇಂದು ಸಂಜೆ ಉಡುಪಿಗೆ ತಲುಪಲಿದ್ದಾರೆ.ತಮಿಳುನಾಡು ಬಿಜೆಪಿ ನಾಯಕಿಯೂ ಆಗಿರುವ ಖುಷ್ಬು, ಘಟನೆ ನಡೆದಿರುವ ಕಾಲೇಜಿಗೆ ಭೇಟಿ ನೀಡಲಿದ್ದಾರೆ.‌

ವಿದ್ಯಾರ್ಥಿಗಳು ಇಂಥ ಕೆಲಸ ಮಾಡುವುದು ಬೇಸರದ ವಿಷಯ ಎಂದು ಟ್ವೀಟ್ ಮಾಡಿರುವ ಖುಷ್ಬೂ, ಮಹಿಳಾ ಆಯೋಗದ ಸದಸ್ಯೆಯಾಗಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ಜತೆ ಮಾತಾಡುವೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!