Wednesday, June 3, 2026
Homeಕರಾವಳಿಮಂಗಳೂರು:  ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳ್ಳತನ

ಮಂಗಳೂರು:  ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳ್ಳತನ

- Advertisement -
- Advertisement -

ಮಂಗಳೂರು:  ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳ್ಳತನ ಮಾಡಿರುವ ಘಟನೆ ಮಂಗಳೂರಿನ ಪಿವಿಎಸ್‌ ವೃತ್ತದ ಬಳಿ ನಡೆದಿದೆ.

ಮಹಿಳೆಯೋರ್ವರು ಬೆಳಗ್ಗೆ ಪಿವಿಎಸ್‌ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಕಾರು ಸರ್ವೀಸ್‌ ಸೆಂಟರ್‌ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಬಂದು 10 ರೂ. ನೋಟನ್ನು ಅವರ ಕಾರಿನ ಎಡಭಾಗದಲ್ಲಿ ಹಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದಾನೆ .

ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಕಾರಿನ ಬಲಬದಿಯಲ್ಲಿಯೂ ನೋಟು ಇರುವುದಾಗಿ ತಿಳಿಸಿದ. ಮಹಿಳೆ ಅದನ್ನು ಹೆಕ್ಕಿ ನೀಡಲು ಹೋದಾಗ ಮತ್ತೋರ್ವ ಅಪರಿಚಿತ ಎಡಭಾಗದಿಂದ ಕಾರಿನ ಡ್ರೈವರ್‌ ಸೀಟಿನಲ್ಲಿದ್ದ 20,000 ರೂ. ನಗದು, ಕ್ರೆಡಿಟ್‌ ಕಾರ್ಡ್‌, ಬೀಗದ ಕೀ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್‌ ನ್ನು ಕಳವು ಮಾಡಿಕೊಂಡು ಹೋಗಿದ್ದಾನೆ.ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!