Thursday, June 4, 2026
Homeಕರಾವಳಿಉಡುಪಿ ಉಡುಪಿ: ಹೊಳೆಯಲ್ಲಿ ಕೊಚ್ಚಿ ಹೋಗಿ ಬಾಲಕಿ ಸಾವು

 ಉಡುಪಿ: ಹೊಳೆಯಲ್ಲಿ ಕೊಚ್ಚಿ ಹೋಗಿ ಬಾಲಕಿ ಸಾವು

- Advertisement -
- Advertisement -

ಉಡುಪಿ: ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಲ್ಕನೇ ತರಗತಿ ಬಾಲಕಿ ಸಾವನ್ನಪ್ಪಿರುವ ಘಟನೆ
ಕುಂದಾಪುರದ ಅಮಾಸೆಬೈಲಿನ ಶೇಡಿಮನೆ ಗ್ರಾಮದ ಬಡಾಬೈಲು ಎಂಬಲ್ಲಿ ನಡೆದಿದೆ. ಬಡಾಬೈಲುವಿನ ರಚನಾ(13)  ಮೃತ ಬಾಲಕಿ.

4ನೇ ತರಗತಿ ಓದಿದ್ದ ಈಕೆ, ನಂತರ ಮಾನಸಿಕ ಅನಾರೋಗ್ಯದಿಂದ ಶಾಲೆ ತೊರೆದು ಮನೆಯಲ್ಲಿಯೇ ಇದ್ದಳು. ನಿನ್ನೆ ತನ್ನ ಅಜ್ಜಿ ಸಾಧಮ್ಮ ಶೆಡ್ತಿ ಜೊತೆ ದನ ಕರುಗಳನ್ನು ಮೇಯಿಸುತ್ತಿರುವಾಗ ಗದ್ದೆಯ ಪಕ್ಕದಲ್ಲಿರುವ ಗಂಗಡಬೈಲು ಹೊಳೆ ಬದಿಗೆ ಹೋದ ರಚನಾ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಳೆನ್ನಲಾಗಿದೆ.

ನಂತರ ಸುಮಾರು 2 ಕಿಲೋ ಮೀಟರ್ ದೂರದ ಶೇಡಿಮನೆ ಗ್ರಾಮದ ಮುಂಡುಬೈಲು ಎಂಬಲ್ಲಿನ ಹೊಳೆನೀರಿನಲ್ಲಿ ರಚನಾಳ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!