Wednesday, June 3, 2026
Homeಕರಾವಳಿಮಂಗಳೂರು: ಹಾಲು ಉತ್ಪಾದಕರ ಸಂಘದಲ್ಲಿ ಕಳ್ಳತನ

ಮಂಗಳೂರು: ಹಾಲು ಉತ್ಪಾದಕರ ಸಂಘದಲ್ಲಿ ಕಳ್ಳತನ

- Advertisement -
- Advertisement -

ಮಂಗಳೂರು: ಹಾಲು ಉತ್ಪಾದಕರ ಸಂಘದಲ್ಲಿ ಕಳ್ಳರು ಕಂಪ್ಯೂಟರ್ ಕಳ್ಳತನ ಮಾಡಿರುವ ಘಟನೆ  ಮುಲ್ಕಿಯ ಬಳ್ಕುಂಜೆಯಲ್ಲಿ ನಡೆದಿದೆ.

ಕಳ್ಳರು ಹಾಲು ಉತ್ಪಾದಕರ ಸಂಘದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ಕತ್ತರಿಸಿ ಒಳ ನುಗ್ಗಿ ಹಣವಿದ್ದ ತಿಜೋರಿಯನ್ನು ಜಾಲಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬಳಿಕ  ಟೇಬಲ್ ಮೇಲಿದ್ದ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ.

ಇನ್ನು ಎರಡನೇ ಬಾರಿ ಈ ಹಾಲಿನ ಸೊಸೈಟಿಯಲ್ಲಿ ಕಳ್ಳತನ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಸುಮಾರು ನಾಲ್ಕು ಸಾವಿರದಷ್ಟು ಹಣವನ್ನು ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿತ್ತು ಎಂದು ಸೊಸೈಟಿ ಕಾರ್ಯದರ್ಶಿ ವನಿತಾ ಮಾಹಿತಿ ನೀಡಿದ್ದಾರೆ.

ಯಾರೋ ಗೊತ್ತಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು ಸಮೀಪದ ಅಂಗನವಾಡಿಯ ಬೀಗ ಮುರಿದು ಒಳಹೊಕ್ಕ ಕಳ್ಳರು ಏನು ಸಿಗದೆ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!