Wednesday, June 3, 2026
Homeಕರಾವಳಿಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ಬಾಲಕ ಸಾವು?

ಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ಬಾಲಕ ಸಾವು?

- Advertisement -
- Advertisement -

ಬೆಳ್ತಂಗಡಿ : ರಜೆ ಇದ್ದ ಕಾರಣ ಮನೆಯಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವನ್ನಪ್ಪಿದ ಘಟನೆ ದಿಡುಪೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಮೊದಲ ಮಗ 8 ನೇ ತರಗತಿ ವಿದ್ಯಾರ್ಥಿ ಶ್ರೀಷಾ (14)  ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದು ತಂಗಿ ನೋಡಿ ತಂದೆಗೆ ಮಾಹಿತಿ ನೀಡಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಜುಲೈ 16 ರಂದು ಸಂಜೆ ನಡೆದಿದೆ.

ಬಾಲಕನ ಶವ ಶವಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!