Saturday, June 13, 2026
Homeಕರಾವಳಿಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಿದ್ದಾರೆ. ಜಲ್ಲಿಗುಡ್ಡೆಯ ಲಿಖಿತ್ (19) ಬಂಧಿತ ಆರೋಪಿ.

ಪ್ರೌಢಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಇನ್‌ಸ್ಟಾಗ್ರಾಂ ಮೂಲಕ ಲಿಖಿತ್ ಪರಿಚಿತನಾಗಿದ್ದ. ಇಬ್ಬರೂ ಆತ್ಮೀಯರಾಗಿದ್ದರು. ಈ ಮಧ್ಯೆ ಆರೋಪಿ ಯುವಕನು ಬಾಲಕಿಯನ್ನು ಅಪಹರಿಸಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಲಿಖಿತ್ ತನ್ನ ಗೆಳೆಯನ ಬಾಡಿಗೆ ಮನೆಯೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಕೂಡಿ ಹಾಕಿರುವುದನ್ನು ಪತ್ತೆಹಚ್ಚಿದ್ದರು. ಆರೋಪಿಯ ವಿರುದ್ಧ ಅಪಹರಣ, ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಉರ್ವ ಇನ್‌ಸ್ಪೆಕ್ಟರ್ ಭಾರತಿ ಜಿ. ಸಿಬ್ಬಂದಿಯಾದ ಹರೀಶ್, ಅನಿತಾ ಮತ್ತವರ ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

- Advertisement -

Latest News

error: Content is protected !!