Friday, June 5, 2026
Homeಕರಾವಳಿವಿಟ್ಲ; ರಿಕ್ಷಾ ಪಲ್ಟಿಯಾಗಿ ಪಂಜದ ಚಾಲಕ ಸಾವು

ವಿಟ್ಲ; ರಿಕ್ಷಾ ಪಲ್ಟಿಯಾಗಿ ಪಂಜದ ಚಾಲಕ ಸಾವು

- Advertisement -
- Advertisement -

ವಿಟ್ಲ; ರಿಕ್ಷಾ ಪಲ್ಟಿಯಾಗಿ ಪಂಜ ಮೂಲದ ಚಾಲಕ ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಲ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸುಳ್ಯದ ಪಂಜ ನಿವಾಸಿ ಸುದರ್ಶನ್‌ (35)  ಮೃತ ಆಟೋ ಚಾಲಕ . ಜೂ 26 ರಂದು ರಾತ್ರಿ ಸುದರ್ಶನ್‌ ಹಾಗೂ ಇನ್ನೊಬ್ಬರು ಮಾಣಿಲ ಬಾವಲಿ ಮೂಲೆಗೆ ಬರುತ್ತಿದ್ದಾದ ಮಾಣಿಲ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಚಾಲಕ ಸುದರ್ಶನ್‌ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಜತೆಗಿದ್ದ ಪ್ರಯಾಣಿಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ . ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮಹಜರು ನಡೆಸಿದ್ದು , ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!