Saturday, June 6, 2026
Homeಕರಾವಳಿಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು: ಹುಟ್ಟುಹಬ್ಬದಂದೇ ...

ಬೆಳ್ತಂಗಡಿ : ಸರಕಾರಿ ಬಸ್ – ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು: ಹುಟ್ಟುಹಬ್ಬದಂದೇ  ಅಪಘಾತಕ್ಕೆ ಬಲಿಯಾದ ಯುವಕ

- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಸಾವನ್ನಪ್ಪಿದ ಘಟನೆ ಜೂ 20 ಬೆಳಿಗ್ಗೆ ಗರ್ಡಾಡಿ ಬಳಿ ನಡೆದಿದೆ.

ಪಡಂಗಡಿ ಸಮೀಪದ ಒಡಿಲು ಎಂಬಲ್ಲಿಯ ದಿಕ್ಷೀತ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುತಿದ್ದ ಬಸ್ ಗರ್ಡಾಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು.  ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!