Sunday, June 7, 2026
Homeಕರಾವಳಿಬಂಟ್ವಾಳ: ಟೈಲರ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಎರಡು ಮಕ್ಕಳ ತಾಯಿ ನಾಪತ್ತೆ

ಬಂಟ್ವಾಳ: ಟೈಲರ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಎರಡು ಮಕ್ಕಳ ತಾಯಿ ನಾಪತ್ತೆ

- Advertisement -
- Advertisement -

ಬಂಟ್ವಾಳ: ಟೈಲರ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಎರಡು ಮಕ್ಕಳ ತಾಯಿ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಗ್ರಾಮದ ಮುಗ್ದಲ್ ಗುಡ್ಡೆ ನಿವಾಸಿ ವಾಣಿಶ್ರೀ ನಾಪತ್ತೆಯಾದ ಮಹಿಳೆ.

ವಾಣಿ ಶ್ರೀ ಅವರನ್ನು ಕಳೆದ 10 ವರ್ಷಗಳ ಹಿಂದೆ ವೇಣೂರಿನ ಯೋಗೀಶ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ  ಆ ಬಳಿಕ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬಂಟ್ವಾಳದ ತಾಯಿ ಮನೆಯಲ್ಲಿ ವಾಸವಾಗಿದ್ದರು.ಆದರೆ ಮೇ. 21 ರಂದು ವಾಣಿಶ್ರೀ ಅವರು ಹಳೆಯಂಗಡಿಯ ಪರಿಚಿತ ವ್ಯಕ್ತಿ ವರುಣ್ ಎಂಬಾತನ ಜೊತೆ ಹೋಗಿದ್ದರು. ಆದರೆ ಮರುದಿನ ಮಂಗಳೂರಿನಿಂದ ಮಗಳನ್ನು ಮನೆಯವರು ಕರೆದುಕೊಂಡು ಬಂದಿದ್ದರು.

ಈ ಘಟನೆ ನಡೆದು ನಾಲ್ಕು ದಿನದ ಬಳಿಕ ಟೈಲರ್ ಅಂಗಡಿಗೆ ಹೋಗಿ‌ಬರುತ್ತೇನೆ ಎಂದು ಮನೆಯಲ್ಲಿ ಧರಿಸಿದ ಬಟ್ಟೆಯಲ್ಲಿ ಹೋದವಳು ವಾಪಾಸು ಮನೆಗೆ ಬಂದಿಲ್ಲ ಎಂದು ಬಂಟ್ವಾಳ ‌ನಗರ ಪೊಲೀಸ್ ಠಾಣೆಗೆ ಈಕೆಯ ತಾಯಿ ಸುನಂದಾ ಅವರು ದೂರು ನೀಡಿದ್ದಾರೆ.ಟೈಲರ್ ಅಂಗಡಿಯಲ್ಲಿ ವಿಚಾರಿಸಿದಾಗ ಅಲ್ಲಿಗೂ ಬರದೆ ನಾಪತ್ತೆಯಾಗಿದ್ದು ಈಕೆ ಮತ್ತೆ ಹಳೆಯಂಗಡಿಯ ವರುಣ್ ಜೊತೆಗೆ ಹೋಗಿರಬಹುದು ಎಂದು ತಾಯಿ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗಳನ್ನು ಹುಡುಕಿಕೊಡಿ ಎಂದು ಬಂಟ್ವಾಳ ‌ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!