Friday, May 17, 2024
Homeಕರಾವಳಿಉಡುಪಿಉಡುಪಿ; ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್‌ಗೆ ವಂಚನೆ

ಉಡುಪಿ; ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್‌ಗೆ ವಂಚನೆ

spot_img
- Advertisement -
- Advertisement -

ಉಡುಪಿ: ತಾನು ಮುಂಬೈನ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಸಾಫ್ಟ್ವೇರ್ ಇಂಜಿನಿಯರ್‌ಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಗದ ಸಾಫ್ಟ್ವೇರ್ ಇಂಜಿನಿಯರ್‌ಗೆ ರೋಶನ್ ಕೋಟ್ಯಾನ್(26) ಎಂಬವರ ಮೊಬೈಲ್‌ಗೆ ಜೂ.12ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಕೊರಿಯರ್ ಸಂಸ್ಥೆಯವರೆಂದು ತಿಳಿಸಿ, ನಿಮ್ಮ ಮೊಬೈಲ್ ನಂಬ್ರನಲ್ಲಿ ಅಕ್ರಮ ಮಾದಕ ವಸ್ತು ಎಂಡಿಎಂಎ ಇರುವ ಪಾರ್ಸೆಲ್ ಬಗ್ಗೆ ಕೇಸ್ ದಾಖಲಾಗಿದ್ದು, ಈ ಬಗ್ಗೆ ನಾರ್ಕೋರ್ಟಿಸ್ಸ್ ಬ್ಯೂರೋ ಮುಂಬೈಗೆ ದೂರು ನೀಡುವಂತೆ ತಿಳಿಸಿ ಸ್ಕೈಪ್ ಐಡಿ ನೀಡಿದ್ದನು.

ನಂತರ ರೋಶನ್, ಸ್ಕೈಪ್ ಮೂಲಕ ಮಾತನಾಡಿದಾಗ ತಾವುಗಳು ಮುಂಬೈ ಪೊಲೀಸ್ ಅಧಿಕಾರಿಗಳು ಎಂದು ನಂಬಿಸಿ, ನಿಮ್ಮ ಆಧಾರ್ ನಂಬ್ರನಲ್ಲಿ ಅಕ್ರಮ ಹಣ ವರ್ಗಾವಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಅಲ್ಲದೆ ಈ ಬಗ್ಗೆ ಹಣ ಕಳುಹಿಸುವಂತೆ ಸೂಚಿಸಿದ್ದು, ಹಾಗೆ ರೋಶನ್, ಒಟ್ಟು 49,554ರೂ. ಹಣವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಈ ಮೂಲಕ ಆರೋಪಿಗಳು ರೋಶನ್ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.

- Advertisement -
spot_img

Latest News

error: Content is protected !!