Saturday, August 29, 2026
Homeಕರಾವಳಿಕಿನ್ನಿಗೋಳಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಲ್ಲುಕೋರೆಯ ನೀರಿನಲ್ಲಿ ಪತ್ತೆ

ಕಿನ್ನಿಗೋಳಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಲ್ಲುಕೋರೆಯ ನೀರಿನಲ್ಲಿ ಪತ್ತೆ

- Advertisement -
- Advertisement -

ಕಿನ್ನಿಗೋಳಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಲ್ಲುಕೋರೆಯ ನೀರಿನಲ್ಲಿ ಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ಬೆಳಕಿಗೆ ಬಂದಿದೆ.

ಹೊಸಕಾವೇರಿ ನಿವಾಸಿ ಚಂದ್ರಕಾಂತ್ (40) ಮೃತಪಟ್ಟ ವ್ಯಕ್ತಿ. ಚಂದ್ರಕಾಂತ್ ನಿನ್ನೆ (ಸೋಮವಾರ) ಬೆಳಗ್ಗೆಯಿಂದ ನಾಪತ್ತೆಯಾಗಿದ್ರು ಎಂದು ತಿಳಿದುಬಂದಿದೆ. ಇಂದು( ಮಂಗಳವಾರ) ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!